ವಾರಣಾಸಿಯ ಜಿಲ್ಲಾ ಕೋರ್ಟ್‍ನಲ್ಲಿ ಇವತ್ತು ಕಾಶಿಯ ಜ್ಞಾನವಾಪಿ ಮಸೀದಿ ವಿಚಾರಣೆ ನಡೆಯೋ ಸಾಧ್ಯತೆ ಇದೆ. ಪ್ರಕರಣವನ್ನು ಸಿವಿಲ್ ಕೋರ್ಟ್‍ನಿಂದ ಜಿಲ್ಲಾ ಕೋರ್ಟ್‍ಗೆ ವರ್ಗಾಯಿಸಬೇಕು ಅಂತ ದೆಹಲಿ ಮೂಲದ ಮಹಿಳೆ ಕೇಳಿಕೊಂಡಿದ್ದರು. ಪ್ರಕರಣದ ಸಂಕೀರ್ಣತೆ, ಸೂಕ್ಷ್ಮತೆಯಿಂದಾಗಿ ಪ್ರಕರಣವನ್ನು ವರ್ಗಾಯಿಸ್ತಿದ್ದೇವೆ ಅಂತ ಸುಪ್ರೀಂಕೋರ್ಟ್ ಹೇಳಿತ್ತು. ಇನ್ನು, ಮಸೀದಿ ಒಳಗೆ ಪತ್ತೆಯಾದ ಶಿವಲಿಂಗದ ಬಗ್ಗೆ ಪರ-ವಿರೋಧ ಮುಂದುವರಿದಿದೆ. ಮಸೀದಿಯ ನೆಲಮಾಳಿಗೆಯಲ್ಲಿ ಕಾಶಿ ವಿಶ್ವನಾಥನಿಗೆ ಹೊಂದಿಕೊಂಡಂತೆ ಮತ್ತೊಂದು ಶಿವಲಿಂಗ ಇದೆ. ನಾನು ಅದನ್ನು ನೋಡಿದ್ದೇನೆ. ಅದಕ್ಕೆ ಬೇಕಾದ ಸಾಕ್ಷ್ಯ ಇದೆ. ಅದು ಸ್ವಯಂಭೂ ಲಿಂಗವಾಗಿದೆ. ಅಲ್ಲಿ ಪೂಜೆಗೆ ಅವಕಾಶ ಕೋರಿ ಕೋರ್ಟ್ ಮೊರೆ ಹೋಗಲು ಚಿಂತನೆ ನಡೆಸಿದ್ದೇವೆ ಅಂತ ಕಾಶಿಯ ಪ್ರಧಾನ ಅರ್ಚಕ ಮಹಾಂತ ಕುಲಪತಿ ತಿವಾರಿ ಹೇಳಿದ್ದಾರೆ. ಆದರೆ, ಅಲ್ಲಿ ಶಿವಲಿಂಗವೇ ಇಲ್ಲ. 2024ರ ಚುನಾವಣೆಗೆ ಇಷ್ಟೆಲ್ಲಾ ಅಜೆಂಡಾ ಮಾಡ್ತಿದ್ದಾರೆ ಅಂಥ ಅಂತ ಎಸ್‍ಪಿ ಸಂಸದ ಶಫಿಕುರ್ ರಹಮಾನ್ ಬಾರ್ಗ್ ಹೇಳಿದ್ದಾರೆ. ಈ ಮಧ್ಯೆ, ಕಾಶಿಯ ಜ್ಞಾನವಾಪಿ, ಮಥುರಾ ಶಾಹಿ ಈದ್ಗಾ ಮಸೀದಿ ಬಳಿಕ ಇದೀಗ ಲಖನೌದ ಪ್ರಸಿದ್ಧ `ಟೀಲೆವಾಲಿ' ಮಸೀದಿಯ ಮೇಲೂ ಹಿಂದೂ ಕಾರ್ಯಕರ್ತರು ದೃಷ್ಟಿ ಹರಿಸಿದ್ದಾರೆ. ಟೀಲೆವಾಲಿ ವಾಸ್ತವದಲ್ಲಿ ಲಕ್ಷ್ಮಣತಿಲಾ ಆಗಿದೆ. ಅಲ್ಲಿ ಹನುಮಾನ್ ಚಾಲೀಸಾ ಪಠಿಸ್ತೇವೆ ಅಂತ ಹಿಂದೂ ಕಾರ್ಯಕರ್ತರು ಹೇಳಿದ್ದಾರೆ.ಇದನ್ನು ವಿರೋಧಿಸೋದಾಗಿ ಮಸೀದಿಯಾ ಇಮಾಮ್ ಕೂಡ ಎಚ್ಚರಿಸಿದ್ದಾರೆ.
#PublicTV #Karwar